Blog

There are proven sustainable models and processes that link sustainable energy solutions to poverty alleviation. But they get lost in the large picture because of lack of understanding of the grassroot problems that exist among the underserved communities of India. That needs to change if we have to tackle poverty in a more systematic way – decentralized sustainable energies like solar, biomass, small wind, etc. provide these solutions.

To alleviate poverty, we all know one needs to increase incomes. To increase incomes, one needs to create income-generating activities in underserved areas. Many of the income generating activities require access to reliable energy. Contrary to popular economics and policies, it is not advisable to wait for centralized energy solutions to provide that particular economic impetus. Inefficiencies, hidden subsidies, poor implementation and lack of transparency have never been properly factored while comparing centralized versus decentralized energy options. Also one needs to factor in the loss to the world’s well being owing to not (or delay in) providing the poor with reliable energy. The result is very evident – large numbers of poor have remained poor with no avenues to increase their income and quality of life. The cost of delaying the solutions of poverty alleviation is not only enormous but is often neglected.

Skilled seamstresses cannot upgrade their manual sewing machines to electric machines, trained poor welders do not have options to open welding shops, silk weavers lament the unavailability of reliable electricity, higher electricity bills (because of inefficient motors) eat into incomes and the list goes on. Decentralized energy solutions can be provided at their doorstep provided one thinks of holistic solutions. A sustainable solution can be provided if the technology, value of technology, finance, and market linkages are spoken about in the same breath.

Small interventions like solar lighting solutions to replace kerosene lamps for village vendors, efficient sky lighting for households in the slums of Mumbai can lead the poor away from expensive present-day options, thus leading to savings, increased number of healthy working hours, etc. These are just a couple of examples but there are thousands of such simple, small interventions using sustainable energy that can directly lead to a better quality of life and increased incomes for the poor – and many of these solutions or interventions can cross country borders.

Many of the solutions and models of business, for the problems mentioned above, already exist in India. They need to be scaled up and replicated. Eradication of poverty leads to a healthier world with a stable social structure – an important element in today’s world. India today has the necessary tools to demonstrate models of linking sustainable energy to poverty alleviation that could be easily replicated in Africa, South America, Iraq, Afghanistan, etc.

ಸುಸ್ಥಿರ ಶಕ್ತಿ ಮತ್ತು ಬಡತನ ನಿವಾರಣೆ

– ಡಾ. ಹರೀಶ್ ಹಂದೆ

ಸುಸ್ಥಿರ ಶಕ್ತಿ ಪರಿಹಾರಗಳು ಮತ್ತು ಬಡತನ ನಿವಾರಣೆಯನ್ನು ಪರಸ್ಪರ ಜೋಡಿಸಬೇಕಾದ ಅನಿವಾರ್ಯತೆಯಲ್ಲಿ ನಾವಿಂದು ಇದ್ದೇವೆ. ಅದಕ್ಕಾಗಿ ಹಲವಾರು ಯಶಸ್ವಿ ಮಾದರಿಗಳು ನಮ್ಮೆದುರಿಗಿವೆ. ಆದರೆ, ಭಾರತದಲ್ಲಿನ ಸಮುದಾಯಗಳ ಸಾಮಾಜಿಕ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳದಿದ್ದರೆ ಈ ಮಾದರಿಗಳಿದ್ದೂ ವ್ಯರ್ಥ ಎಂಬಂತಾಗಿದೆ. ಈ ಎಲ್ಲ ಮಾದರಿಗಳನ್ನು ಅಳವಡಿಸಲು ಬಹುಮುಖ್ಯವಾಗಿ ಇಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ. ಬಡತನವನ್ನು  ಕ್ರಮಬದ್ಧವಾಗಿ ಹೋಗಲಾಡಿಸಲು ಮೊದಲು ಇವನ್ನು ಬದಲಿಸಬೇಕು – ಸೌರಶಕ್ತಿ, ಪವನ ಶಕ್ತಿ, ಮುಂತಾದ ನವೀಕರಿಸಬಹುದಾದ ಶಕ್ತಿ ಈ ಪರಿಹಾರಗಳನ್ನು ಒದಗಿಸುತ್ತವೆ. ಇವುಗಳು ವಿಕೇಂದ್ರೀಕೃತ ಹಾಗೂ ಸುಸ್ಥಿರ ಶಕ್ತಿಗಳು.

ಬಡತನ ನಿವಾರಣೆಗೆ, ನಮಗೆಲ್ಲ ಗೊತ್ತಿರುವ ವಿಚಾರವೆಂದರೆ ಆದಾಯವನ್ನು ಹೆಚ್ಚಿಸುವುದು. ಆದಾಯದ ಹೆಚ್ಚಿಸಲು, ಸೌಲಭ್ಯವಂಚಿತ ಪ್ರದೇಶಗಳಲ್ಲಿ ಆದಾಯ ತರಬಲ್ಲಂಥ ಚಟುವಟಿಕೆಗಳನ್ನು ಮಾಡಬೇಕಾದ ಅಗತ್ಯವಿದೆ. ಸಾಕಷ್ಟು ಆದಾಯದ ಚಟುವಟಿಕೆಗಳಿಗೆ ವಿಶ್ವಾಸಾರ್ಹ ಶಕ್ತಿಯ ಅಗತ್ಯವಿರುತ್ತದೆ. ಈಗಿರುವ ಜನಪ್ರಿಯ ಅರ್ಥವ್ಯವಸ್ಥೆ ಮತ್ತು ನೀತಿಗಳಿಗೆ ವ್ಯತಿರಿಕ್ತವಾಗಿ, ನಿರ್ದಿಷ್ಟ ಆರ್ಥಿಕ ಉತ್ತೇಜನವನ್ನು ಒದಗಿಸುವ ಕೇಂದ್ರೀಕೃತ ಶಕ್ತಿ ಪರಿಹಾರಗಳಿಗಾಗಿ ಕಾಯುವುದು ಸೂಕ್ತವಲ್ಲ. ಸಾಮಾನ್ಯವಾಗಿ ಅಸಾಮರ್ಥ್ಯ, ಗುಪ್ತ ಸಹಾಯಧನಗಳು, ಕಳಪೆ ಅನುಷ್ಠಾನ, ಪಾರದರ್ಶಕತೆಯ ಕೊರತೆ, ಮುಂತಾದವುಗಳನ್ನು ನೀತಿನಿರೂಪಕರು ಸರಿಯಾದ ರೀತಿಯಲ್ಲಿ ಗಣನೆಗೆ ತೆಗೆದುಕೊಳ್ಳುವುದಿಲ್ಲ.

ಯಾವುದೇ ವಿಧಾನದ ಶಕ್ತಿಯ ಆಯ್ಕೆ ಮಾಡುವಾಗ ಬಡವರಿಗೆ ವಿಶ್ವಾಸಾರ್ಹ ಶಕ್ತಿಯನ್ನು ಒದಗಿಸದೆ ಇರುವುದು ಅಥವಾ ಒದಗಿಸುವಲ್ಲಿ ಆದ ವಿಳಂಬದಿಂದ ಸಮಾಜಕ್ಕೆ ಆಗುವ ನಷ್ಟವನ್ನೂ ಸಹ ಯೋಚಿಸಬೇಕು. ಈ ರೀತಿಯ ವಿಳಂಬ ಹಾಗೂ ಶಕ್ತಿಯನ್ನು ಒದಗಿಸದೇ ಇರುವುದರಿಂದ ಸಿಗುವ ಫಲಿತಾಂಶ ಬಹಳ ಸ್ಪಷ್ಟ – ಬಡವರ ಆದಾಯ ಮತ್ತು ಅವರ ಜೀವನದ ಗುಣಮಟ್ಟ ಹೆಚ್ಚಿಸಲು ಯಾವುದೇ ಮಾರ್ಗ ಇಲ್ಲ. ಕಾರಣ, ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ. ಅಷ್ಟೇ ಅಲ್ಲ, ಬಡತನ ನಿವಾರಣೆಗಾಗಿ ಸಾಧ್ಯವಿರುವ ಪರಿಹಾರಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಆದ ವಿಳಂಬದ ವೆಚ್ಚ ಹೆಚ್ಚಿದ್ದರೂ ಅದನ್ನು ನಿರ್ಲಕ್ಷಿಸಲಾಗುತ್ತದೆ.

ನುರಿತ ಟೈಲರ್ ‍ಗಳು ತಮ್ಮ ಹೊಲಿಗೆ ಯಂತ್ರಕ್ಕೆ ವಿದ್ಯುತ್‍ನ್ನು ಅಳವಡಿಸಲಾರರು. ತರಬೇತಿ ಪಡೆದಿರುವ ವೆಲ್ಡರ್ ಗಳು ತಮ್ಮದೇ ಆದ ವೆಲ್ಡಿಂಗ್ ಅಂಗಡಿಗಳನ್ನು ತೆರೆಯಲು ಆಯ್ಕೆಗಳಿಲ್ಲ. ವಿದ್ಯುಚ್ಛಕ್ತಿಯ ಅಲಭ್ಯತೆ ಹಾಗೂ ಅನಿಯಮಿತ ವಿದ್ಯುತ್ತಿನಿಂದಾಗಿ ರೇಷ್ಮೆ ನೇಕಾರರು ತಮ್ಮ ಉದ್ಯಮವನ್ನು ಸಮರ್ಪಕವಾಗಿ ನಡೆಸಲು ಸಾಧ್ಯವಿಲ್ಲದ್ದರ ಬಗ್ಗೆ ನೊಂದುಕೊಳ್ಳುತ್ತಾರೆ. ಗುಣಮಟ್ಟ ಇಲ್ಲದ ಮೋಟರುಗಳಿಂದ ಉಂಟಾದ ವಿದ್ಯುತ್ ಬಿಲ್, ಅವರ ಆದಾಯವನ್ನು ಕಬಳಿಸುತ್ತದೆ. ಹೀಗೆ ಸಮಸ್ಯೆಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇವನ್ನೆಲ್ಲ ಸರಿಪಡಿಸಲು ಸಮಗ್ರ ಪರಿಹಾರಗಳ ಬಗ್ಗೆ ಯೋಚಿಸಿದಾಗ ತಿಳಿಯುವುದೇನೆಂದರೆ ವಿಕೇಂದ್ರೀಕೃತ ಶಕ್ತಿಯ ಪರಿಹಾರಗಳನ್ನು ಮನೆಯ ಬಾಗಿಲಿಗೇ ತಲುಪಿಸಬಹುದು ಎಂದು. ತಂತ್ರಜ್ಞಾನ, ಅದರ ಮಹತ್ವ, ಹಣಕಾಸು ಮತ್ತು ಮಾರುಕಟ್ಟೆಯ ಸಂಪರ್ಕ, ಇವುಗಳ ಕುರಿತು ಸಮಗ್ರವಾಗಿ ಚಿಂತಿಸಿದಾಗ ಮಾತ್ರ ಸುಸ್ಥಿರ ಶಕ್ತಿಯ ಪರಿಹಾರವನ್ನು ನೀಡಲು ಸಾಧ್ಯ.

ಶಕ್ತಿಯ ಪರಿವರ್ತನೆ

ಗ್ರಾಮೀಣ ಪ್ರದೇಶದಲ್ಲಿ ಕಿರು ಉದ್ಯಮವನ್ನು ನಡೆಸುತ್ತಿರುವವರು ಬಳಸುವ ಸೀಮೆ ಎಣ್ಣೆ ದೀಪಗಳನ್ನು ಬದಲಿಸಿ ಸೌರ ದೀಪಗಳನ್ನು ಅಳವಡಿಸುವುದು, ಮುಂಬೈನಂತಹ ಮಹಾನಗರಗಳ ಕೊಳಚೆಪ್ರದೇಶಗಳಲ್ಲಿನ (ಸ್ಲಮ್ಮುಗಳಲ್ಲಿನ) ಮನೆಗಳಿಗೆ ಬೆಳಕು ಬರುವ ಮೇಲ್ಛಾವಣಿಯ ವ್ಯವಸ್ಥೆ ಮಾಡುವುದು ಇತ್ಯಾದಿ. ಇಂತಹ ಸಣ್ಣ ಸಣ್ಣ ಶಕ್ತಿಯ ಪರಿವರ್ತನೆಗಳು ಬಡವರನ್ನು ದುಬಾರಿ ದಿನಬಳಕೆ ವಸ್ತುಗಳಿಂದ ದೂರ ಇಡುತ್ತವೆ. ಇದರಿಂದ ಉಳಿತಾಯ, ಆರೋಗ್ಯಕರ ಕೆಲಸದ ಸಮಯ ಇತ್ಯಾದಿ ಹೆಚ್ಚುತ್ತವೆ. ಇವು ಕೆಲವು ಉದಾಹರಣೆಗಳು ಮಾತ್ರ. ಸುಸ್ಥಿರ ಶಕ್ತಿಯ ಸಹಾಯದಿಂದ ಇಂತಹ ಸಾವಿರಾರು ಸರಳ, ಸಣ್ಣ ಪರಿವರ್ತನೆಗಳನ್ನು ನಾವು ಮಾಡಬಹುದಾಗಿದೆ. ಇದು ಉತ್ತಮ ಗುಣಮಟ್ಟದ ಜೀವನಕ್ಕೆ ನೇರವಾಗಿ ಕಾರಣವಾಗಬಹುದು ಮತ್ತು ಬಡವರಿಗೆ ಹೆಚ್ಚಿನ ಆದಾಯವನ್ನೂ ತಂದುಕೊಡಬಲ್ಲದು. ಈ ಪರಿಹಾರಗಳು ಭಾರತದಲ್ಲಿ ಮಾತ್ರವಲ್ಲದೆ ದೇಶದ ಗಡಿ ದಾಟಿ ಹಲವೆಡೆ ಉಪಕಾರಿಯಾಗಬಹುದು ಕೂಡ.

ಮೇಲಿನ ಕೆಲವು ಸಮಸ್ಯೆಗಳಿಗೆ ವ್ಯಾವಹಾರಿಕ ಪರಿಹಾರಗಳು ಮತ್ತು ಮಾದರಿಗಳು ಈಗಾಗಲೇ ಭಾರತದಲ್ಲಿವೆ. ಅವುಗಳನ್ನು ದೊಡ್ಡ ಮಟ್ಟದಲ್ಲಿ ಪರಿಗಣಿಸಿ ಪುನರಾವರ್ತಿಸಬೇಕಾಗುತ್ತದೆ. ಸುಸ್ಥಿರ ಸಮಾಜವನ್ನು ಮತ್ತು ಆರೋಗ್ಯಕರ ಪ್ರಪಂಚವನ್ನು ನಿರ್ಮಿಸಲು ಬಡತನ ನಿರ್ಮೂಲನೆ ಪ್ರಬಲ ಕಾರಣವಾಗುತ್ತದೆ – ಪ್ರಸ್ತುತ ಜಗತ್ತಿನಲ್ಲಿ ಇದೊಂದು ಪ್ರಮುಖ ಅಂಶ. ಸುಸ್ಥಿರ ಶಕ್ತಿಯನ್ನು ಬಡತನ ನಿವಾರಣೆಗೆ ಬಳಸಬಹುದು ಎಂಬ ಮಾದರಿಯನ್ನು ತೋರಿಸಲು ಭಾರತ ಅಗತ್ಯ ಮಾದರಿಗಳನ್ನು ಹೊಂದಿದೆ. ಆಫ್ರಿಕಾ, ದಕ್ಷಿಣ ಅಮೆರಿಕಾ, ಇರಾಕ್, ಅಫ್ಘಾನಿಸ್ತಾನ ಮುಂತಾದ ರಾಷ್ಟ್ರಗಳಲ್ಲಿ ಇದನ್ನು ಸುಲಭವಾಗಿ ಪುನರಾವರ್ತಿಸಬಹುದು.

Tags : clean energyLivelihoodPoverty AlleviationsolarSustainable Energy
Harish Hande

The author Harish Hande

Leave a Response